Thursday, June 2, 2011

ಅದು ಬೇಸಿಗೆ ಕಾಲ, ಧಗಧಗನೆ ಉರಿಯುತ್ತಿರುವ ಸೂರ್ಯನ ಕಣ್ಗಳಿಂದ ತಪ್ಪಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸುತ್ತಿದ್ದ ಸಮಯ. ಅಂತಹ ಕಾಲದಲ್ಲಿ ಮಟ ಮಟ ಮಧ್ಯ:ನ ಅಮ್ಮನ ಬೆಚ್ಚನೆಯ ಗರ್ಭಕೋಶದಿಂದ ತಾನು ಪ್ರಪಂಚವನ್ನು ನೋಡುವ ಕಾತರದಿ ಧರೆಗೆ ಇಳಿದಳು ಕೄಷ್ಣವರ್ಣೆಯ ಮುಗ್ಧ ಮಗು. ಮುದ್ದು ಮುಖ:, ಸುಂದರ ನಯನಗಳನ್ನು ಹೊಂದಿದ ಹೆಣ್ಣುಕೂಸು ಅಮ್ಮನ ಮಂಚದ ಪಕ್ಕದಲ್ಲಿನ ತೊಟ್ಟಿಲಲ್ಲಿ ಮಲಗಿತ್ತು. ಅಮ್ಮ ತನ್ನ ಮಾತೃತ್ವದ ಪರವಶದಿಂದ ಮಗುವನ್ನು ನೋಡುತ್ತಿರುವಾಗ, ಆ ಕಂದಮ್ಮನಿಗೆ ಅದರ ಅರಿವಿಲ್ಲದೆ ಹೊಸ ಪ್ರಪಂಚದಲ್ಲಿ ತನ್ನನ್ನು ಹೊಂದಿಸಿಕೊಳ್ಳುವ ಪ್ರಯತ್ನದಲ್ಲಿ ಪವಳಿಸಿ ವಿಶ್ರಮಿಸುತ್ತಿತ್ತು.

ಆನಂದ್ ದಂಪತಿಗಳಿಗೆ ಇದು ದ್ವಿತೀಯ ಸಂತಾನ. ಮೊದಳನೆಯ ಸಂತಾನವು ಕೂಡ ಹೆಣ್ಣು. ದಂಪತಿಗಳಿಗೆ ತಮ್ಮ ಮನೆಗೆ ನೂತನ ಸಧಸ್ಯೆಯ ಮಿಲನದ ಸಂತಸದಲ್ಲಿ ತೇಲುತ್ತಿದ್ದಾಗ, ಆ ಸಂತಸದ ಮಧ್ಯೆ ಅವರಿಗೆ ಕೇಳಿಬಂದ ಶಬ್ಧ, " ಈ ಸಾರಿ ಕೂಡ ಹೆಣ್ಣು ಮಗುವೇನಾ"


Tuesday, May 24, 2011

ಬೆಂಗಳೂರೆಂಬ ಮಹಾ ನಗರದಲ್ಲಿ ಒಂದು ಪುಟ್ಟ ಮನೆ, ಅಲ್ಲಿ ವಾಸವಾಗಿದ್ದವರು ನೆರೆ ರಾಜ್ಯದ ದಂಪತಿಗಳು ಮತ್ತೂ ಅವರ ತಾಯಿ..

ಪತಿಯ ಉದ್ಯೋಗರೀತ್ಯ ಬೆಂಗಳೂರಿಗೆ ಬಂದವರು ಈ ದಂಪತಿಗಳು. ಒಂದು ಸಣ್ಣ ಮನೆಮಾಡಿ ಅಲ್ಲಿ ವಾಸವಾಗಿದ್ದರು. ಅವರ ಜೊತೆ ಇದ್ದವರು ತಾಯಿ ಹಾಗೂ ಗರ್ಭದಲ್ಲಿ ಕಾತರದಿ ಪ್ರಪಂಚವನ್ನು ನೋಡಲು ಕಾಯುತ್ತಿದ್ದಂತಹ ಒಂದು ಮೂಖ ಜೀವ.

Monday, May 23, 2011

ನಾನು, ನನ್ನ ಮನದ ಕಥೆ.

           ಬೆಂಗಳೂರೆಂಬ ಮಹಾ ಪಟ್ಟಣದಲ್ಲಿ, ಅಂದಿಗಾಗಳೆ ಮಹಿಳೆಯರ ಮೇಲಿನ ದೌರ್ಜನ್ಯ ನಶಿಸಿ, ಮಹಿಳೆಯರಿಗೆ ಸ್ಥಾನ ಮಾನ ಕಲ್ಪಿಸಿಕೊಡುತ್ತಿದ್ದ ಕಾಲ. ಅಂತಹ ಸಮಯದಲ್ಲಿ ಕೂಡ ಹೆಣ್ಣುಮಕ್ಕಳೆಂದರೆ ನಿರ್ಲಕ್ಷ ಮನೋಭಾವನೆಯನ್ನು ಹೊಂದಿದವರು ಅಲ್ಲಲ್ಲಿ ಕಾಣುತ್ತಿದ್ದರು.
ಅಂತಹ ಭಾವನೆಯುಳ್ಳವರ ಮನೆಯಲ್ಲಿ ಜನಿಸಿದ ಒಂದು ಮುಗ್ಧ ಮಗುವಿನ ಅಂತರಂಗದ ಕಥೆಯೇ ಈ " ನನ್ನ ಮನದ ಕಥೆ ".

ನನ್ನ ಜೀವನದಲ್ಲಿ ನನ್ನ ಮನ ಮುಟ್ಟಿದಂತಹ ಕಥೆ.